ಕೆಲವೊಂದು ಸಲ, ಸ್ವಲ್ಪ ಉಳಿಸಬೇಕು ಅಂತ ಅನ್ಕೊಂಡು ಜಾಸ್ತಿನೇ ವೇಸ್ಟ್ ಮಾಡ್ತೀವಿ.. ನಾನು ಬರಿತಾ ಇರೋ ಈ ಆರ್ಟಿಕಲ್ ಗೂ ಮೇಲೆ ಹೇಳಿದ ಡೈಲಾಗ್ ಗೂ ಯಾವುದೇ ಸಂಬಂಧ ಸಿಗೊಲ್ಲ.. ಸುಮ್ನೆ ಬಾಯಿಗೆ ಬಂತು ಅಂತ ಹೇಳ್ದೆ.. ಒಂದು ಚಿಕ್ಕ ಘಟನೆನ ಸೀರಿಯಲ್ ಥರ ಎಷ್ಟ್ ಆಗುತ್ತೋ ಅಷ್ಟು ಎಳಿಯಣ ಅಂತ ಅನ್ಕೊಂಡೆ.. ಸಾಕು ಮುಖ್ಯ ವಿಷಯಕ್ಕೆ ಬರ್ತಿನಿ..
ನಂಗೂ ನಾನ್-ವೆಜ್ ಊಟಕ್ಕೂ ಎಷ್ಟೋ ಜನ್ಮದ ನಂಟು.. ನನ್ನ ಬಗ್ಗೆ ಗೊತ್ತಿರೋರನ್ನ ಕೇಳಿದ್ದ್ರೆ ಪುರಾಣನೇ ಹೇಳ್ತಾರೆ, ಹೀಗೆ ಒಂದು ದಿನ ಆಫೀಸ್ ಕೆಲಸ ಲೇಟಾಗಿ ಮುಗಿಸಿ ಮನೆಗೆ ಹೊಗ್ತಾ ಇದ್ದೆ, ಯಾಕೋ ಪ್ರಶಾಂತ್ ಹೋಟೆಲ್(ರಾಜಾಜಿನಗರದಲ್ಲಿ ಫೇಮಸ್) ನೆನಪಾಯ್ತು (ಅದು ಮಾಮೂಲಿನೆ ಬಿಡಿ), ರೂಮ್ ಮೇಟ್ಸ್ ಯಾರು ಇರಲ್ಲಿಲ್ಲ.. ಅದಕ್ಕೆ "ಒಬ್ಬನೆ ಒಬ್ಬನೇ ಮಂಜುನಾಥನೊಬ್ಬನೇ" ಅಂತ ಹಾಡ್ ಹೇಳ್ಕೊಂಡು ಹೋಟೆಲ್ ಗೆ ಹೋದೆ.. ಎರಡು ಚಪಾತಿ, ಎಗ್-ಬೋಟಿ ಫ್ರೈ ಹೇಳಿದೆ.. ಒಳ್ಳೆ ಕಾಂಬಿನೇಷನ್.. ಸಕ್ಕತ್ತಾಗಿತ್ತು.. ಈಗ್ಲೂ ಬಾಯಲ್ಲಿ ನೀರು..
ಊಟ ಮುಗಿಸಿ ಹೊರಟಾಗ ರಾತ್ರಿ ಸುಮಾರು ೮.೩೦.. ನೆಡ್ಕೊಂಡು ಹೋಗ್ಲಾ ಅಥವಾ ಬಸ್ ಅಲ್ಲಿ ಹೋಗ್ಲಾ ಅಂತ ಯೋಚನೆ ಮಾಡ್ತಿದ್ದೆ, ಅಷ್ಟೊತ್ತಿಗೆ ಕೆ.ಆರ್ ಮಾರುಕಟ್ಟೆ ಗೆ ಹೋಗೋ ೭೭ ಬಸ್ಸು ನವರಂಗ್ ಸಿಗ್ನಲ್ ಅಲ್ಲಿ ನಿಂತಿತ್ತು.. ಹೋಗಿ ಹತ್ತ್ಕೊಂಡೆ..
ಇಡೀ ಬಸ್ ಖಾಲಿ, ಲೇಡಿ ಕಂಡಕ್ಟರ್ ಫೋನಲ್ಲಿ ಮಾತಡ್ತಾ ಮುಂದೆ ಕೂತಿದ್ದ್ರು, ಖಾಲಿ ಇದ್ಯಲ್ಲಾ ಅಂತ "ಹಿರಿಯ ನಾಗರಿಕರಿಗೆ" ಸೀಟಲ್ಲಿ ಕೂತ್ಕೊಂಡೆ.. ಒಂದು ಸ್ಟಾಪ್ ಬಂತು,ಇನ್ನೂ ಟಿಕೆಟ್ ಕೇಳಿಲ್ಲ.. ನಾನೆ ಸನ್ನೆ ಮಾಡ್ದೆ, ಮನಸಲ್ಲೆ (ಫೋನಲ್ಲಿ) ಬಯ್ಯ್ಕೊಂಡು ಇ.ಎಸ್.ಐ ಗೆ ಟಿಕೆಟ್ ಕೊಟ್ರು.. ಯಾವಾಗಲೂ ರಷ್ ಇರೋ ಬಸ್ಸು ಯಾಕೆ ಖಾಲಿ ಹೊಡಿತಿದೆ ಅಂತ ಅನ್ಕೊಂಡು, ಕಂಡಕ್ಟರ್ ನ ಕೇಳಿದೆ, "ಏನ್ ಮೇಡಮ್ ಫುಲ್ ಖಾಲಿ ಹೊಡಿತಿದೆ ಬಸ್ಸು",
ಅವ್ರು : ಮುಂದೆ ಇದೇ ರೂಟ್ ನ ಇನ್ನೊಂದು ಗಾಡಿ ಹೋಗ್ತಿದೆ ಸರ್ ಅದಕ್ಕೆ..
ನಾನು: ಸುಮ್ನೆ ಎಷ್ಟು ಡೀಸೆಲ್ ವೇಸ್ಟ್ ಅಲ್ವಾ ಮೇಡಮ್.. ಮಾಮೂಲಿ ಡೀಸೆಲಾ ಅಥವಾ ಬಯೋ-ಡೀಸೆಲಾ..??
ಅವ್ರು: ಮಾಮೂಲಿ ಡೀಸೆಲ್ಲೇ ಸರ್, ನಮ್ಮ್ ಟ್ರಿಪ್ ನಾವ್ ಮುಗ್ಸಬೇಕು ಅಷ್ಟೇ.. ದೊಡ್ಡೋರು ಎಷ್ಟೆಷ್ಟೋ ವೇಸ್ಟ್ ಮಾಡ್ತಾರೆ, ನಾವು ಡ್ಯೂಟಿ ಮಾಡ್ತದ್ದಿವಿ ಅದ್ರಲ್ಲೇನು ತಪ್ಪು ಸರ್.. ಒಂದು ರಜಕ್ಕೆ ಅಥವಾ ಒಂದು ರೂಟ್ ಗೆ ಹಾಕ್ಸಕೋಬೇಕಂದ್ರೆ ಎಷ್ಟು ದುಡ್ಡು ಕೊಡ್ಬೇಕು..ಅಂತವ್ರ್ನೆಲ್ಲ ಹಿಡಿಯಲ್ಲ ನಮ್ಮೋರು, ಯಾರೋ ಪಾಪ ಐದು ರುಪಾಯಿ ಟಿಕೆಟ್ ಗೆ ಮೂರು ರುಪಾಯಿ ಕೊಡೋ ಬಡವನ್ನ ಹಿಡಿತಾರೆ.. ಹೋಗ್ಲಿ ಬಿಡಿ.. ಈಗ ಈ ಟ್ರಿಪ್ ಮುಗ್ಸಿ ಮನೆಗೆ ಹೋಗೋಷ್ಟ್ರಲ್ಲಿ ರಾತ್ರಿ ಹತ್ತೂವರೆ ಆಗುತ್ತೆ, ಊಟ ಮಾಡಿ ಮಲಗೊವಾಗ ಹನ್ನೆರಡು ಗಂಟೆ.. ಮತ್ತೆ ಬೆಳಗ್ಗೆ ಐದೂವರೆ ಟ್ರಿಪ್ ಗೆ ರೆಡಿ ಇರ್ಬೇಕು, ಎಷ್ಟೋ ಸಲ ಗಂಡ-ಮಕ್ಕಳ ಮುಖಾನೂ ನೊಡೊಕಾಗಲ್ಲ..
ನಾನು: ಹೋಗ್ಲಿ ಬಿಡಿ ಮೇಡಮ್ ಕಷ್ಟಪಟ್ಟು ದುಡಿತಿದ್ದಿರಾ, ಎಲ್ಲಾ ಒಳ್ಳೆಯದೇ ಆಗುತ್ತೆ..
ಇಷ್ಟು ಮಾತಾಡೊಷ್ಟ್ರಲ್ಲಿ ಸ್ಟಾಪ್ ಬಂತು, ಆ ಲೇಡಿ ಕಂಡಕ್ಟರ್ ಗೆ ಒಂದು ನಮಸ್ಕಾರ ಹಾಕಿ ಮನೆ ಕಡೆಗೆ ಹೊರಟೆ..
ಎಷ್ಟೋ ಸಲ ನಾವು ಯಾರಿಗಾದ್ರು ಸಜೆಷನ್ಸ್ ಕೊಡ್ತೀವಿ.. ಆದರೆ ಅದರ ಇನ್ನೊಂದು ಆಯಾಮ ನಮಗೆ ಗೊತ್ತಿರೊಲ್ಲ.. ಇಲ್ಲಿ ಅವ್ರು ಮಾಡಿದ್ದು ಡೀಸೆಲ್ ವೇಸ್ಟ್ ಅಂತ ನಂಗೆ ಅನ್ಸುತ್ತೆ, ಆದ್ರೆ ಅದೆ ಅವರ ಕೆಲಸ.. ಅವ್ರ ಕೆಲಸ ಅವ್ರು ಮಾಡುದು ಯಾವ್ದೇ ರೀತಿ ವೇಸ್ಟ್ ಅಲ್ಲ ಅಂತ ಯೋಚನೆ ಮಾಡ್ತಾ ಇದ್ದೆ, ಮನೆ ಬಂದಿದ್ದೆ ಗೊತ್ತಾಗ್ಲಿಲ್ಲ...