ಮೊನ್ನೆ ಸಂಜೆ, ಅಂದ್ರೆ ಆಗಸ್ಟ್ ೨೯ ೨೦೧೮, ಆಫ಼ಿಸ್ ಮುಗ್ಸಿ ಮನೆಗೆ ಹೊರಟೆ, ಕ್ವಾಯ್sss(ಅಭಿ) ಫ಼ೋನ್ ಮಾಡಿ ಮನೆಗೆ ಬರ್ತಿನಿ ಅಂದ, ಜೋರು ಮಳೆ☔, ಮನೆಗೆ ಬರೋಷ್ಟ್ರಲ್ಲಿ ಅರ್ಧ ವದ್ದೆ, ಎಲ್ಲಾರು ಜೊತೆಯಲ್ಲಿ ಊಟಕ್ಕೆ ಹೋಗೋಣ ಅಂತ ಕಾಯ್ತಿದ್ದೆ, ಆಗ ಜಯಂತ 🍟 McDonald'sಗೆ ಹೋಗೋಣ ಅಂದ, ಸರಿ ಕಿರಣನೂ ಇದ್ದ ಎಲ್ಲಾ ಹೊರಟ್ವಿ.. ಅಲ್ಲೊಂದಷ್ಟು ವಿಚಾರಗಳು, ಅದನ್ನ ನಾನು ನೇರವಾಗಿ ಸಿಕ್ಕಾಗ್ಲೇ ಕೇಳಿ, ಇಲ್ಲಾಂದ್ರೆ ಈಗ ಬರಿತಾ ಇರೋ ಅಂಕಣ(ಅಭಿಪ್ರಾಯ) ದಾರಿ ತಪ್ಪುತ್ತದೆ😅..
ಈಗ ಮುಖ್ಯ ವಿಷಯಕ್ಕೆ ಬರೋಣ.. ಕನಸು.. ಪೃಥ್ವಿ ಫಿಲ್ಮಲ್ಲಿ ಪುನೀತ್ ಹೇಳೋ "ಕನಸು ಅಂದ್ರೆ ನಿದ್ದೆ ಮಾಡೋವಾಗ ಕಾಣೋದಲ್ಲ, ನಿದ್ದೆ ಮಾಡೋಕೂ ಬಿಡದೆ ಗುರಿ ಮುಟ್ಟೋವರಗೂ ಕಾಡುತ್ತಲ್ಲಾ ಅದು ಕನಸು".. ಆದ್ರೆ ನಾನು ಈಗ ಹೇಳೋಕೆ ಹೊರಟಿರೋದು ಈ ಡೈಲಾಗ್ನ ಶುರುವಿನಲ್ಲಿ ಬರೋ ಕನಸಿನ ಬಗ್ಗೆ🙈🙈.. ಸ್ಕೂಲ್ ಟೈಮಲ್ಲಿ, ನಮ್ಮ ಶೋಭಾ ಅರಸ್ ಮಿಸ್ ಯಾವಾಗಲೂ ಹೇಳೋರು, ಕನಸುಗಳನ್ನ ಒಂದು ಕಡೆ ಬರೆದಿಡಿ ಅಂತ.. ಹಾಗೆ ಎಲ್ಲಾ ಕನಸು ನೂರಕ್ಕೆ ನೂರು ಪ್ರತಿಶತ ನೆನಪಿರೋಲ್ಲಾ ಅಂತಾನು ಹೇಳಿದ್ದರು.. ನಮಗೆ ಎಚ್ಚರ ಆದಾಗ ನೆನಪಿರೋದು ಕೂಡ ಭಾಗಶಃ, ಆದರೆ ಕೆಲವು ಕನಸುಗಳು ನಿಜ ಜೀವನದಲ್ಲಿ ನೆಡೆದಂತೆ ಭಾಸವಾಗುತ್ತದೆ.. ಕೆಲವು ಕನಸುಗಳಿಗೆ ಲಿಂಕ್ ಕೂಡ ಇರಲ್ಲ.. ನೀವು ನಿಜ ಜೀವನದಲ್ಲಿ ನೋಡದೇ ಇರೋ ಜಾಗಗಳೆಲ್ಲಾ ಕನಸಲ್ಲಿ ಬರುತ್ತೆ ಅಂದ್ರೆ, ಕನಸು ಹಾಗು ಕನಸು ಕಾಣೋ ಮನಸ್ಸಿನ ಶಕ್ತಿ ಬಗ್ಗೆ ಅಂದಾಜು ಮಾಡಿ..
""ಯಾವುದೋ ನೆನಪಿಲ್ಲದ ಒಂದು ರೈಲ್ವೆ ನಿಲ್ದಾಣದಲ್ಲಿ ಟಿಕೇಟ್ ಗೆ ಅಂತ ಸಾಲಲ್ಲಿ ನಿಂತಿರ್ತಿನಿ, ಪ್ಲಾಟ್ ಫ಼ಾರ್ಮ್ ಗೆ ಬಂದ್ರೆ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ಅದು,🚆ಟ್ರೈನ್ ಬಂತು, ಹತ್ಕೊಂಡೆ.. ಆಮೇಲೆ ನೋಡಿದ್ದ್ರೆ ಯಾವುದೋ ಫ಼ಿಲ್ಮ್ ಥಿಯೇಟರ್ ಅದು.. ಮೆಟ್ರೋ ಒಳಗೆ ಥಿಯೇಟರ್ ಅಂತ ನಂಗೂ ಕನಪ಼್ಯೂಸ್ ಆಯ್ತು.. ಆದರೆ ಕನಸ್ಸಿಗೆ ಅದೆಲ್ಲಾ ಎಲ್ಲಿ..
ಕಟ್ ಮಾಡಿದ್ರೆ, ಯಾವುದೋ ಮನೆಯಲ್ಲಿ ಹಬ್ಬದ ವಾತಾವರಣ, ಎಲ್ಲರೂ ಚಂದ್ರನನ್ನು ನೋಡಲು ಹಾತೊರೆಯುವುದು ಕಾಣುತ್ತದೆ, ಸ್ವಲ್ಪ ಸಮಯದ ನಂತರ ಯುಗಾದಿ ಸಮಯದಲ್ಲಿ ಕಾಣಿಸೋ ಥರ, ಒಂದು ಸಣ್ಣ ಎಳೆಯಷ್ಟು ಇರೋ 🌙ಚಂದ್ರ ಕಾಣಿಸುತ್ತೆ, ಎಲ್ಲಾರು ನೋಡಿ ಖುಷಿ ಪಡ್ತಾರೆ, ನಾನು ಮತ್ತೆ ಇನ್ನೊಬ್ಬ ಗೆಳೆಯ (ಜಯಂತ್ ಅಥವಾ ರಾಜು ನಾ ಸರಿಯಾಗಿ ನೆನಪಿಲ್ಲ) ಮಹಡಿ ಮೇಲಿಂದ ನೋಡೊಣ ಅಂತ ಮೇಲೆ ಹೋಗ್ತೀವಿ.. ನೋಡಿದ್ರೆ ಅಲ್ಲೊಂದು ದೊಡ್ಡ ಗಾತ್ರದ ಪೂರ್ಣ ಚಂದ್ರನಂತೆ ಆಕಾರ ಹಾಗು ಚಂದ್ರನಷ್ಟೇ ಹೊಳೆಯುವ ಮತ್ತೊಂದು ಆಕಾಶಕಾಯ🌕, ಇದೇನು ಎರಡೆರಡು ಚಂದ್ರ ಅಂತ ನನ್ನ ಗೆಳೆಯ ಹೇಳೋಷ್ಟರಲ್ಲಿ ಅದು ಸೂರ್ಯ ಯಾಕಾಗಿರಬಾರದು ಅಂತ ಇನ್ನೊಬ್ಬರು ಯಾರೋ ಹೇಳ್ತಾರೆ, ರಾತ್ರಿ ಹೊತ್ತಿನಲ್ಲಿ ಸೂರ್ಯ ಹೇಗೆ ಅದು ಕೂಡ ಚಂದ್ರನ ಹಾಗೆ ಜಾಸ್ತಿ ಪ್ರಕಾಶಮಾನವಿಲ್ಲದ ಇದೇನು ಅಂತ ವಾಗ್ವಾದ ಮಾಡ್ತಿರ್ತಿವಿ..
Sudden ಆಗಿ ಒಂದು ದೊಡ್ಡ ಗುರುತ್ವಾಕರ್ಷಣಾ ಶಕ್ತಿ (Gravitational force), ನಮ್ಮೆಲ್ಲರನ್ನೂ ಆ ಆಕಾಶಕಾಯದ ಕಡೆ ಸೆಳೆಯಲಾರಂಭಿಸುತ್ತದೆ, ಏನಾಗ್ತಿದೆ ಅಂತ ಯೋಚನೆ ಮಾಡೋಷ್ಟರಲ್ಲಿ ಎಲ್ಲಾರು ಅದರ ಕಡೆಗೆ ತುಂಬಾ ವೇಗವಾಗಿ ಹೋಗ್ತಾ ಇದ್ದಿವಿ.. ಬಸ್ಸ್ ಅಥವಾ ಟ್ರೈನಲ್ಲಿ ಹೋಗುವಾಗ ಕಿಟಕಿಯಲ್ಲಿ ನೋಡಿದಾಗ ಗಿಡಮರಗಳು ಕಾಣಿಸೋ ಥರ ನಮಗೆ ಬೇರೆ ಜನರು ಹಾಗು 🌌ನಕ್ಷತ್ರ ಪುಂಜಗಳು ಕಾಣಸಿಗುತ್ತವೆ.. ಒಂಥರಾ ಕಪ್ಪುಕುಳಿ (Black hole) ಕಡೆ ಹೋಗ್ತಿದ್ದಿವಿ ಅಂತ ಅನ್ನಿಸಿತು.. ನನ್ನ ಮೂರ್ಛೆ ತಪ್ಪುತ್ತದೆ.. ಮುಂದೇನು..
ಕಟ್ ಮಾಡಿದ್ರೆ, ಎಲ್ಲಾರು ನಿನ್ನೆ ಇದ್ದ ಜಾಗದಲ್ಲೆ ವಾಪಸು ಬಂದಿದಿವಿ.. ಸುತ್ತಮುತ್ತಲಿನ ಜನರು ನಿನ್ನೆ ನೆಡೆದ ಘಟನೆ ಬಗ್ಗೆ ಏನೇನೋ ಮಾತಾಡ್ತಾ ಇದ್ದಾರೆ ಆದರೆ ಅವರ್ಯಾರು ಅಲ್ಲಿನವರಲ್ಲ, ಆಗ ಮಹಡಿಗೆ ಅಮ್ಮನ ಫ್ರೆಂಡ್ ಲೈಸಮ್ಮ ಆಂಟಿ ಮಗ ಅನಿಲ್ ಬರ್ತಾನೆ (ನಿನ್ನೆ ಇದೇ ಮನೆಯಲ್ಲಿ ಯಾವುದೋ ಹಬ್ಬಕ್ಕಾಗಿ ನಾವು ಚಂದ್ರನ್ನ ನೋಡಿದ್ವಿ, ಇವರು ಕ್ರಿಶ್ಚಿಯನ್✝️, ಅವರು ಯಾವ ಚಂದ್ರನ್ನ ನೋಡೋ ಹಬ್ಬ ಮಾಡ್ತಾರೆ).. ಅವನು ನಿನ್ನೆ ಊರಲ್ಲಿ ಇರಲಿಲ್ಲ.. ಇವತ್ತು ಬೆಳಿಗ್ಗೆ ಬಂದೆ ಅಂತಾನೆ.. ನಾವು ನಿಂತಿರೋ ಮಹಡಿ ಮನೆ ಕೂಡ ಅವರದ್ದೆ ಅಂತ ಹೇಳ್ತಾನೆ.. ಅವನ ಗೆಳೆಯ ಒಬ್ಬ ಇಸ್ರೋ ಲಿ ಕೆಲಸ ಮಾಡ್ತಿದ್ದು, ಅವನು ಇಲ್ಲಿನ ವಿಷಯ ತಿಳಿದು ಅನಿಲ್ ಜೊತೆ ಬಂದಿರುತ್ತಾನೆ, ನಾವು ನಿನ್ನೆ ರಾತ್ರಿ ಏನು ನೆಡೆದಿರಬಹುದು ಅಂತ ಅವನೊಂದಿಗೆ ಡಿಸ್ಕಸ್ ಮಾಡ್ತಿವಿ.. ಅವನು ಎಲ್ಲೋ ಹೋಗ್ತಾನೆ.. ನಾನು ನಮ್ಮ ಮನೆಯಲ್ಲಿ ಇನ್ಸ್ಟಾಲ್ ಮಾಡಿರೋ 🔭 ಎಲೆಕ್ಟ್ರಾನಿಕ್ ಟೆಲಿಸ್ಕೋಪ್ ಅ್ಯಂಡ್ ರೆಕಾರ್ಡಿಂಗ್ ಯುನಿಟ್ ನಲ್ಲಿ ಏನಾದರೂ ದಾಖಲಾಗಿದೆಯಾ ಅಂತ ಮನೆಗೆ ಬಂದು ನೋಡ್ತಿನಿ.. ಅದನ್ನು ನೋಡಿದಾಗ ರಾತ್ರಿಯ ಸಮಯದಲ್ಲಿ ಇದ್ದಕ್ಕಿದ್ದಂತೆ ಗುರುತ್ವ ಅಲೆಗಳು ಜಾಸ್ತಿ ಆಗಿ ಅದು ಒಂದು ದೊಡ್ಡ ತರಂಗದಂತೆ ಬಂದು ಒಂದು ಲೂಪ್ ಕಂಪ್ಲೀಟ್ ಮಾಡಿರೋದು ರೆಕಾರ್ಡ್ ಆಗಿರುತ್ತೆ.. ಸ್ಪೆಕ್ಟ್ರಮ್ ನ ನೋಡಿ Wavelength ಚೆಕ್ ಮಾಡಿ, ದೂರ ಅಳೆದರೆ ಅದು ಹೆಚ್ಚು ಕಡಿಮೆ ಸೂರ್ಯನ ಹಾಗೂ ಭೂಮಿಯ ನಡುವೆಯ ಅಂತರದಷ್ಟೆ ದೂರದಿಂದ ಬಂದಿರಬಹುದು ಎಂದು ಖಾತ್ರಿಯಾಗುತ್ತದೆ.. ನನಗೆ ಅದೇನೋ ಸೋಲಾರ್ ಫ಼್ಲೇರ್ ಇಂದ ಆಗಿರಬಹುದು ಅಂದ ಅನ್ಸುತ್ತೆ.. ನಾನು ಅನಿಲ್ ಫ್ರೆಂಡ್ ಗೆ ಹೇಳೋಣ ಅಂತ ಮತ್ತೆ ಅಲ್ಲಗೆ ಹೋಗ್ತೀನಿ.. ಅನಿಲ್ ಕೇಳ್ತಾನೆ ನಾನು ಅದನ್ನು ಮತ್ತೆ ವಿವರಿಸುತ್ತೀನಿ..
"ಒಂದು ಬೃಹತ್ತಾದ ಸೋಲಾರ್ ಫ್ಲೇರ್ (Massive solar flare), ಬುಧ ಗ್ರಹವನ್ನು ಮುಟ್ಟುವಷ್ಟು ದೊಡ್ಡದು, ಅದು ಮತ್ತೆ ಸೂರ್ಯನೆಡೆಗೆ ಹೋಗುವಾಗ ಅದರ ಅಲೆ ನಮ್ಮನ್ನು ಅದರತ್ತ ಸೆಳೆಯುತ್ತದೆ.. ಆದರೆ ಅದು ವಾಪಸು ಸೂರ್ಯನೆಡೆಗೆ ಹೋಗುವಾಗ ಮತ್ತೊಂದು ಇದಕ್ಕಿಂತ ಸಣ್ಣ ಸೋಲಾರ್ ಫ್ಲೇರ್ ನಮ್ಮನು ವಿರುದ್ಧದ ದಿಕ್ಕಿನಲ್ಲಿ ಅಂದರೆ ಭೂಮಿಯ ಕಡೆಗೆ ವಾಪಸು ಕಳಿಸುತ್ತದೆ, (ಮ್ಯಾಗ್ನೆಟ್ ನ ಪ್ರಿನ್ಸಿಪಲ್ ಥರಾನೂ ಇರಬಹುದು) ಅಂದ್ರೆ ಇದು ಒಂಥರಾ ರೆಸಲ್ಯೂಷನ್ ಆಫ಼್ ಫ಼ೋರ್ಸ್ಸಸ್ ನ ಹಾಗೆ (Resolution of Forces)."
ಅನಿಲ್ ಇದರ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ ಅಂತ ಅವನ ಫ಼್ರೆಂಡ್ ನ ಕರಿತಾನೆ, ಅವ್ನಿಗೆ ಇದೆಲ್ಲಾ ಮತ್ತೆ ವಿವರಿಸುತ್ತೇನೆ.. ಆಗ ಅವನು ನಾನು ಹೇಳಿದ್ದು Partially ಸರಿ ಅಂತ ಹೇಳ್ತಾನೆ.. ಇಸ್ರೋ ಮತ್ತೆ ನಾಸಾ ಕೂಡಾ ಇದೇ ರೀತಿ ಹೇಳಿದಾಗ ನಮಗೆ ಫ಼ುಲ್ ಖುಷ್.. ನಾವು ಏನೋ ಕಂಡುಹಿಡಿದ ಫೀಲಿಂಗ್..
ಆದರೆ ಅನಿಲ್ ಫ್ರೆಂಡ್, ಇಲ್ಲೇ ಯಾಕೆ ಬಂದ, 🌍ಭೂಮಿಯ ೬೬% ಭಾಗದಲ್ಲಿ ಈ ಘಟನೆ ನೆಡೆದಿದೆ.. ಆದರೂ ಅವನು ಇಲ್ಲೆ ಬಂದಿದ್ದು ನಂಗ್ಯಾಕೊ ಅನುಮಾನ ಬಂತು.. ಇಲ್ಲೇನಾದ್ರು ವಿಷಯ ಇರಬಹುದು ಅಂತ ನೋಡಿದಾಗ.. ಸುತ್ತಮುತ್ತಲಿನ ಯಾವುದೇ ಜನರು ಇಲ್ಲಿನವರಲ್ಲ.. ಅವರೆಲ್ಲಾ ಬೇರೆ ಭಾಗದ ಜನರು ಅಂತ ನ್ಯೂಸಲ್ಲೂ ಹೇಳ್ತಾರೆ, ಇಲ್ಲಿನ ಜಾಗದ ಜನರು ಬೇರೆ ಪ್ರದೇಶದಲ್ಲಿ ದೊರಕಿದ ಮಾಹಿತಿಯನ್ನು ಕೂಡ ನ್ಯೂಸ್ನಲ್ಲಿ ಪ್ರಸಾರವಾಗುತ್ತದೆ..
ಆದರೆ ನಾವು ಮಾತ್ರ ನಿನ್ನೆ ಇದ್ದ ಜಾಗಕ್ಕೆ ಬಂದಿದಿವಿ.. ಎಲ್ಲೋ ಎನ್ನೋ ಮಿಸ್ ಹೊಡಿತಿದೆ, ಇದೆಲ್ಲಾ ಹುಡುಕಬೇಕು ಅಂತ ಜಯಂತ್ ನ ಕರೆದೆ, ಅವ್ನು ಬಂದ, ನಾನು ಅವನು ಅನಿಲ್ ಮನೆಯ ಪಕ್ಕ ಇರೋ ಒಂದು ಫ಼ಿಲ್ಡ್ ನ ಸುತ್ತ ಮುತ್ತ ಹುಡುಕ್ತಾ ಇದ್ವಿ.. ಆಗ ಅನಿಲ್ ಮನೆ ಹಿಂದೆ, ಒಂದು ದೊಡ್ಡ ನೀರಿನ sumpಗೆ ಇರೋ ಮುಚ್ಚಳದ ಥರಾ ನೆಲದಲ್ಲಿ ಒಂದು ದೊಡ್ಡ ಮುಚ್ಚಳ ಇತ್ತು.. ಅದನ್ನು ಜಯಂತ್ ತೆಗೆದ, ನೋಡಿದ್ರೆ ಅಲ್ಲಿ ನೀರಿಲ್ಲ.. ಬದಲಾಗಿ ಒಂದು ಸುರಂಗ ಮಾರ್ಗದ ರೀತಿಯಲ್ಲಿ ಜಾಗ, ಇಳಿಯಲು ಸ್ಟೀಲ್ ಏಣಿ ಇದ್ದಿದ್ದರಿಂದ ಅವನು ನಂಗೆ ಹೇಳದೆ ಇಳಿದ, ನಾನು ಅವನನ್ನು ಹುಡುಕಿ ಬಂದೆ.. ಜೋರಾಗಿ ಅವನ ಹೆಸರನ್ನು ಕೂಗಿದೆ.. ಅವನ ಧ್ವನಿ "ಬೇಗ ಬಾ ಮಂಜು, ಇಲ್ಲೇನೇನೋ ಇದೆ, ಸಖತ್ತಾಗಿದೆ" ಅಂತ ಆ ಸಂಪ್ ಕಡೆಯಿಂದ ಬಂತು.. ನಾನು ಇಳಿದೆ ನೋಡೋಣ ಅಂತ, ನೋಡಿದ್ರೆ ಅದೊಂದು ದೊಡ್ಡ (space shuttle)🚀 ಸ್ಪೇಸ್ ಶಟಲ್ ನಂತೆ, ಅದರೊಳಗೆ High end equipments, supercomputers, ಏನೇನೋ calculations.. ಆದರೆ ಜನ ಯಾರು ಇಲ್ಲ.. ನಿನ್ನೆ ನೆಡೆದ ಘಟನೆಗೂ, ಇದಕ್ಕೂ,ನಮಗೂ ಎನಾದ್ರು ಲಿಂಕ್ ಇದಿಯಾ ಅಂತ ನಾನು ಜಯಂತ್ ಮಾತಾಡ್ತಿದ್ವಿ.."" 🤔🤔🤔🤔
ಆಗ ಕಿರಣ, "ಸ್ನಾನಕ್ಕೆ ನೀರು ಇಡ್ಲಾ ಮಂಜು?" ಅಂದ..
ನಿದ್ದೆಯಿಂದ ಎದ್ದೆ.. ಪಕ್ಕದಲ್ಲೇ ಜಯಂತ ಪಂಪ್ ಡಿಸೈನ್ ಮಾಡ್ತಾ ಕೂತಿದ್ದ.. ಇದು ಕನಸು ಅಂತ ಗೊತ್ತಾಗ್ತಿದ್ದ ಹಾಗೆ ಮೊದಲು ಇದನ್ನ ಬರಿಬೇಕು ಅಂತ, ಮುಖ್ಯವಾದ ವಿಷಯಗಳನ್ನ ಒಂದು ಕಡೆ ಬರೆದಿಟ್ಟೆ.. ಊರಿಗೆ🚌 ಹೊರಟಾಗ ಪೂರ್ಣ ಮಾಡೋಣ ಅಂತ ಕೂತೆ.. ಆದರೆ ಅದು ಊರಿಂದ ವಾಪಸ್ ಬೆಂಗ್ಳೂರಿಗೆ ಬರ್ತಾ ಮುಗಿತಾ ಇದೆ 🚂.. Sep 3rd..
ಕನಸುಗಳು🌃,💭 ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ಒಂದು ಸುಂದರ ಅನುಭವ (ಕೆಲವೊಮ್ಮೆ ಕರಾಳ, ಕನಸಿನ ಮೇಲೆ depend), ಕನಸುಗಳು ಕೂಡ ನಮ್ಮ ಆಸೆ, ಆಸಕ್ತಿ, ಇಷ್ಟ-ಕಷ್ಟ, ನಿತ್ಯ ಓಡಾಡುವ ಜಾಗ, ನಿತ್ಯ ಬೆರೆಯುವ ವ್ಯಕ್ತಿಗಳೆಲ್ಲದರ ಮೇಲೆ ಅವಲಂಬಿತ.. ಮನಸ್ಸಿನ ಹಾಗೂ ಮೆದುಳಿನ ಒಂದು ಅಗಾಧ ಶಕ್ತಿ.. ಇಂತಹ ನನ್ನದೊಂದು ಕನಸಲ್ಲಿ ನಿಮ್ಮನ್ನು ಆದಷ್ಟೂ ಕರೆದುಕೊಂಡು ಹೋಗಿ, ಎಲ್ಲವನ್ನೂ ವಿವರಿಸಿದ್ದೇನೆ ಎಂದು ಭಾವಿಸುತ್ತೆನೆ.. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯದಿರಿ.. ನಿಮಗೆ ಇಷ್ಟ ಆಗಿದ್ರೆ ಖುಷಿ😊😊, ಇಷ್ಟ ಆಗಿಲ್ಲಾಂದ್ರೆ ಒಂದು ಕೆಟ್ಟ "ಕನಸು" ಅಂತ ಮರೆತುಬಿಡಿ..😅😅
ಆದರೆ ಅಭಿಪ್ರಾಯವನ್ನು ವ್ಯಕ್ತಪಡಿಸಿ.. ಮತ್ತೆ ಸಿಗೋಣ, ತುಮಕೂರು ಬಂತು..😁😀