"ಯಾರಿವನು?"
ನಿನ್ನೆ ಬೆಳಿಗ್ಗೆವರಗೂ ಈ ಹೆಸರನ್ನ ಯಾರೆ ಕೇಳಿದ್ದ್ರೂ ಮುಖದಲ್ಲಿ ಒಂದು ದೊಡ್ಡ ಮಂದಹಾಸ ಇರೋದು..☺ ಅದೆ ಮಧ್ಯಾಹ್ನದ ಮೇಲೆ ಎಲ್ಲಾರ ಮುಖದಲ್ಲೂ ಹೇಳೋಕೆ ಆಗ್ದೆ ಇರೋ ಸಂಕಟ ಆವರಿಸಿತ್ತು..😥 ನಿನ್ನೆ ಅಂದ್ರೆ ೨೯.೧೦.೨೦೨೧ ಬೆಳಿಗ್ಗೆ ಹೃದಯಾಘಾತದಿಂದ ಹೋಗ್ಬಿಟ್ಟ್ರು.. ಅವ್ರು ಹೋದ್ರು, ಆದ್ರೆ ನಮಗೆಲ್ಲಾ ಇಷ್ಟು ಕಷ್ಟ ಆಗ್ತಿದೆ, ಮನಸ್ಸಿಗೆ ಹಿಂಸೆ ಆಗ್ತಿದೆ, ಅಳು ಬರ್ತಿದೆ..😭 ಯಾಕೆ??
ನಂಗೆ ಮತ್ತೆ ನನ್ನ ಥರ ಸಿನಿಮಾ ಹುಚ್ಚು ಇರೋ ಕೋಟ್ಯಾಂತರ ಜನಕ್ಕೆ ಅಳು ಬರುತ್ತೆ ಒಪ್ಪ್ಕೋತೀನಿ.. ಆದರೆ ತೀರಾ ಅಪರೂಪಕ್ಕೆ ಸಿನಿಮಾ ನೋಡೋ ಜನ, ಸಿನಿಮಾನೇ ನೋಡದೆ ಇರೋ ಜನ ಎಲ್ಲಾರು ಇಷ್ಟು ಹಿಂಸೆ ಅನುಭವಿಸ್ತಾ ಇದಾರೆ ಅಂದ್ರೆ ಇದು ಕೇವಲ ಅಪ್ಪುವಿನ ಸಿನಿ ಪ್ರಯಾಣದಿಂದ ಗಳಿಸಿದ ಹಿರಿಮೆ-ಪ್ರಶಂಸೆ ಅದಷ್ಟೇ ಅಲ್ಲ.. ಅಪ್ಪುವಿನಲ್ಲಿದ ಸರಳತೆ, ಎಲ್ಲರಲ್ಲೂ-ಎಲ್ಲದರಲ್ಲೂ ಸಮಾನತೆ ಕಾಣುವ ಹೃದಯ, ತಗ್ಗಿ-ಬಗ್ಗಿ ನಡೆಯುವ ಗುಣ, ಸಹಾಯ ಮಾಡಿ ಅದರ ಬಗ್ಗೆ ಎಲ್ಲೂ ಹೇಳ್ಕೋಳ್ದೆ ಇರೋ ಬುದ್ಧಿ, ಎಲ್ಲರಿಗೂ ಕೊಡ್ತಿದ್ದ ಮರ್ಯಾದೆ, ಯಾವತ್ತಿಗೂ ನಾನು ಕಿರಿಯ ಅನ್ನೋ ಆ ತನ, ಹೊಸದನ್ನ ಕಲಿಯೋ ಉತ್ಸಾಹ, ಅಭಿಮಾನಿಗಳನ್ನ ಯಾವತ್ತೂ ಬಿಟ್ಟುಕೊಡದೇ ಇರೋ ಆ ದೊಡ್ಡ ಗುಣ, ಇದೆಲ್ಲಾದ್ರ ಜೊತೆಗೆ ಅಪ್ಪುನಾ ಯಾರು ಬರೀ ಅಣ್ಣಾವ್ರ ಮಗ ಅಂತ ಅಷ್ಟೇ ಅನ್ಕೊಂಡಿಲ್ಲ.. ನಮ್ಮ ಮನೆ ಮಗ ಅಂತಾನೆ ಅನ್ಕೊಂಡದಾರೆ, ಎಷ್ಟೋ ಜನಕ್ಕೆ ಒಬ್ಬ ಅಣ್ಣನ ಥರ ಕಾಣ್ತಾರೆ, ಸ್ನೇಹಿತನಾಗಿ ಇದಾರೆ, ಆರಾಧ್ಯ ದೈವ ಆಗಿದಾರೆ..🙏
ಇಷ್ಟಕ್ಕೂ ಅಪ್ಪುಗೆ ಹೃದಯಾಘಾತ💔 ಅನ್ನೋ ವಿಷಯಾನೇ ನಮಗೆಲ್ಲಾ ಆಘಾತ, ಅಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ವ್ಯಕ್ತಿ, ಫಿಟ್ನೆಸ್ ಬಗ್ಗೆ ಅರಿವು ಮೂಡಿಸ್ತಾ ಇದ್ದ ವ್ಯಕ್ತಿ, ಜಿಮ್ನಲ್ಲಿ🏋 ವ್ಯಾಯಾಮ ಮಾಡೋ ಟೈಮಲ್ಲೆ ಹೃದಯಾಘಾತದಿಂದ ವಿಧಿವಶರಾಗಿದ್ದು ನಿಜವಾಗಲೂ ಪರಮಾಶ್ಚರ್ಯ..😐 ಎಲ್ಲಾ ಜನರು ವಿಧಿಯ ಕ್ರೂರತೆಯನ್ನು ಶಪಿಸುತ್ತಲೆ ಈ ಬೇಡದ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಾ ಇದ್ದರು.. ಒಬ್ಬ ಹಿರಿಯ ಜೀವಿ ಹೇಳಿದ ಮಾತು ಎಲ್ಲರ ಮನಕಲುಕುವ ಹಾಗಿದೆ, ಅವ್ರು ಹೇಳಿದ್ದು " ಎಷ್ಟೋ ಒಳ್ಳೆ ಕೆಲಸ ಮಾಡ್ತಾ ಇದ್ದ ಆ ನನ್ನಪ್ಪ, ಒಂದು ಚೂರು ಗಲಾಟೆ ಇಲ್ಲ, ಅಹಂಕಾರ ಇಲ್ಲ, ಮಗು ಥರ ಯಾವಾಗ್ಲೂ ನಗ್ತಾ ಇರೊವ, ಈಗ ಇಲ್ಲ ಅಂದ್ರೆ ನಂಬಕೆ ಆಗ್ತಿಲ್ಲ, ಆ ದೆವ್ರು ನನ್ನ್ ಜೀವ ತಗೊಂಡು ಆ ಮನ್ಷನ್ನ ಉಳ್ಸ್ಲಿ, ಅಂತವ್ರು ನೂರ್ ಕಾಲ ಬಾಳ್ಬೇಕು, ಅಂತ ಒಬ್ಬ್ರು ಇದ್ರೆ ಎಷ್ಟೋ ಜನಕ್ಕೆ ಜೀವನ ಸಿಗುತ್ತೆ " ಹೀಗೆ ಕೋಟ್ಯಾಂತರ ಜನ ತಮ್ಮ ನೋವನ್ನ ಹೊರಹಾಕ್ತಾ ಇದ್ರು.. ಅಷ್ಟು ಇಷ್ಟ ಎಲ್ಲರಿಗೂ ಅಪ್ಪು ಅಂದ್ರೆ..
ಅಪ್ಪು ಸಿನಿ 📽️ಜೀವನಾನೇ ಲೆಕ್ಕಕ್ಕೆ ತಗೊಂಡ್ರೆ, ಬಾಲನಟನಾಗಿ ಅಪ್ಪು ಮಾಡಿದ ವಿವಿಧ ಬಗೆಯ ಚಿತ್ರಗಳು, ಆ ಚಿಕ್ಕ ವಯಸ್ಸಿನಲ್ಲೇ ಹಾಡಿದ ರೀತಿ, ಘಟಾನುಘಟಿಗಳ ಮುಂದೆ ಮಾಡಿದ ಅಭಿನಯ, ಈ ಅವಕಾಶ ಎಲ್ಲಾ ಬಾಲನಟ-ನಟಿಯರಿಗೆ ಸಿಗೋದು ತುಂಬಾ ವಿರಳ.. ಅದ್ರಲ್ಲಿ ಅಪ್ಪು "ಭಾಗ್ಯವಂತ"ನೆ ಸರಿ, "ವಸಂತಗೀತ"ದ ಆ ಮದ್ದು ಅಭಿನಯ, 🚊🚂🚃🚃ಭಾಗ್ಯವಂತ ಚಿತ್ರದ ಆ ಮುಗ್ಧ ಕೃಷ್ಣನ್ನ ಈಗ್ಲೂ ಕಣ್ಣಲ್ಲಿ ನೀರು ಹಾಕ್ದೆ ನೋಡೋ ಧೈರ್ಯ ಯಾರಿಗಾದರೂ ಇದಿಯಾ?? ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಅಮ್ಮ ಸೀತಮ್ಮ ಹಾಡುಗಳು,
☁️☁️ಚಲಿಸುವ ಮೋಡಗಳು, ನನ್ನ ಹೆಸರು ರಾಮು, ದೊಡ್ಡವಾನಾದ್ಮೇಲೆ ರಾಮ್ ಪ್ರಸಾದ್ ಅಂತ ಇಟ್ಕೋತಿನಿ, ಕಾಣದಂತೆ ಮಾಯವಾದನು,
🌺 ಬೆಟ್ಟದ ಹೂವು ಚಿತ್ರದಲ್ಲಿ ರಾಮಾಯಣ ಪುಸ್ತಕನ ಕೊಳ್ಳೋಕೆ ಆಗ್ದೆ ಒದ್ದಾಡೋ ಆ ಅಸಹಾಯಕ ಪಾತ್ರಕ್ಕೆ ಬಂದ ರಾಷ್ಟ್ರಪ್ರಶಸ್ತಿ, ⭐⭐ ಎರಡು ನಕ್ಷತ್ರಗಳು, ಆಗ್ಲೆ ದ್ವಿಪಾತ್ರದಲ್ಲಿ ಮಾಡಿದ ಅಭಿನಯ, ನಾರಾಯಣನನ್ನೆ ನರಸಿಂಹಾವತಾರದಲ್ಲಿ ಧರೆಗೆ ಕರೆಸಿಕೊಳ್ಳುವ ಭಕ್ತ ಪ್ರಹ್ಲಾದ 🙏, ಯಾರಿವನು?🤔 ಚಿತ್ರದ ಸಾಹಸ.. ಹೀಗೆ ಒಂದಾ ಎರಡಾ.. ಬಾಲನಟನಾಗಿ ಅಪ್ಪು ಮಿಂಚಿರೋ✨ ಥರ ಯಾರು ಮಿಂಚೋಕೆ ಆಗಲ್ಲ ಅಂತ ಅನ್ಕೋತಿನಿ.. ತುಂಬಾ ಜನಕ್ಕೆ ಅಪ್ಪು ಪೂರ್ಣ ಪ್ರಮಾಣದ ನಾಯಕ ಆಗೋ ಮುಂಚೆನೇ ಕನೆಕ್ಟ್ ಆಗಿದ್ದೆ ಅವರ ಬಾಲ್ಯ ನಟನೆ ಹಾಗೂ ಚಲನಚಿತ್ರಗಳಿಂದ ಅಂತ ಅನ್ಸುತ್ತೆ..
ಅಪ್ಪು ❤️ ಚಿತ್ರದ ಮುಖಾಂತರ ನಾಯಕನಟನಾಗಿ ಶುರು ಮಾಡಿದ ಹೊಸ ಅಧ್ಯಾಯ.. ಅಪ್ಪು ಚಿತ್ರ ಯಾವುದೇ ಹೊಸ ನಾಯಕನಟನೂ ಕನಸು ಕಾಣುವಂತಹ ಪಾದಾರ್ಪಣೆಯ ಚಿತ್ರ, ಆ ಸಾಹಸ, ಆ ನೃತ್ಯ, ಆ ಅಭಿನಯ.. ಅಲ್ಲೆ ಎಲ್ಲರಿಗೂ ಗೊತ್ತಾಯ್ತು ಈ ಅಗಾಧ ಪ್ರತಿಭೆಯ ಇನ್ನೊಂದು ಮುಖ.. ಆಮೇಲೆ ಬಿಡಿ ಅಪ್ಪು ಮುಟ್ಟಿದ್ದೆಲ್ಲಾ ಚಿನ್ನ.. ಅಭಿ, ಆಕಾಶ್, ವೀರಕನ್ನಡಿಗ 💛❤️, ಅಜಯ್, ಮೌರ್ಯ, 🤴ಅರಸು, ಮಿಲನ💕, ವಂಶಿ, ರಾಜ್, ರಾಮ್, ಪೃಥ್ವಿ, ಜಾಕಿ, ಹುಡುಗರು👬👬, ಪರಮಾತ್ಮ🏔️, ಮೈತ್ರಿ, ಯಾರೆ ಕೂಗಾಡಲಿ, ರಣವಿಕ್ರಮ, ದೊಡ್ಮನೆ ಹುಡ್ಗ, ರಾಜಕುಮಾರ👑, ನಟಸಾರ್ವಭೌಮ, ಯುವರತ್ನ 💎 ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟ ನಮ್ಮ ಪ್ರೀತಿಯ ಪವರ್ ಸ್ಟಾರ್.. ಇನ್ನೂ ದ್ವಿತ್ವ ಹಾಗೂ ಜೇಮ್ಸ್ ಚಿತ್ರಕ್ಕೆ ಕಾಯ್ತಾ ಇದ್ವಿ.. ಕಾಯ್ತಾನೆ ಇರಬೇಕು ಅಂತ ಅಪ್ಪು ನಿನ್ನೆನೇ ಹೇಳಿ ಆಯ್ತು..
ಅಪ್ಪು ಜೊತೆಗೆ ಒಂದು ಫೋಟೋ ತಗೋಬೇಕು ಅಂತ ಇದ್ದ ಒಂದು ಕನಸು ಇನ್ನು ಕನಸಾಗೆ ಉಳಿತು.. ಆದ್ರೆ ಎರಡು ಸಲ ಅಪ್ಪುನ ತುಂಬಾ ಹತ್ತಿರದಿಂದ ನೋಡಿದಿನಿ.. ಈ ವಿಷಯ ನಿಮಿಗೆಲ್ಲಾ ಹೇಳ್ಲೇಬೇಕು.. ಜುಲೈ ೧೨, ೨೦೧೬ ಶಿವಣ್ಣನ ಹುಟ್ಟಿದಹಬ್ಬದ ಸಮಾರಂಭಕ್ಕೆ ಅಂತ ರಾಜ್ ಡೈನಾಸ್ಟಿ ಹುಡುಗ್ರು, ಮುಂದೆ ಬರೋ ಟಗರು ಚಿತ್ರದ ೫೫ಕೆ.ಜಿ ಕೇಕ್ ಮಾಡ್ಸಿ ಶಿವಣ್ಣನ ನಾಗವಾರ ಮನೆಗೆ ಹೋಗಿದ್ವಿ, ತುಂಬಾ ಅಭಿಮಾನಿಗಳು ಆಗ್ಲೇ ದೊಡ್ಡ ಸಾಲಲ್ಲಿ ಕಾಯ್ತಾ ನಿಂತಿದ್ರು.. ಸಾಲು ಮನೆ ಅಂಗಳದಿಂದ ನಾಗವಾರ ಸರ್ಕಲ್ ವರೆಗೂ ಇತ್ತು, ನಮ್ಮಲ್ಲಿ ಒಂದೈದಾರು ಜನ ಕೇಕ್ ನ ಕಾವಲು ಕಾಯ್ತಾ ನಿಂತಿದ್ವಿ.. ನಮ್ಮ ಎದುರು ಜನ ಸಾಲಾಗಿ ನಿಂತು ಜೈಕಾರ ಹಾಕ್ತಾ ಇದ್ದ್ರು.. ಇದ್ದಕ್ಕಿದ್ದಂತೆ ನಮ್ಮ ಬೆನ್ನ ಹಿಂದೆ ಒಂದು ಪ್ರಭೆ🌀 ಹೋದ ಹಾಗಾಯ್ತು, ಸಾಲಲ್ಲಿ ಇದ್ದ ಗಲಾಟೆ-ಜೈಕಾರ ಎಲ್ಲಾ ನಮ್ಮಗಳ ಬೆನ್ನಿನ ಕಡೆ ಹೋಯ್ತು ಏನು ಅಂತ ನೋಡ್ತಿನಿ, ಎರಡೇ ಅಡಿ ದೂರದಲ್ಲಿ ನಮ್ಮ ಅಪ್ಪು.. ಓಡಿ ಹೋಗಿ ಮಾತಾಡ್ಸಿ ಫೋಟೋ ತಗೋಬೇಕು ಅನ್ನೋ ಆಸೆ ಆದ್ರೆ ಕೇಕ್ ರಕ್ಷಣೆ ನಮ್ಮ ಜವಾಬ್ದಾರಿ ಆಗಿತ್ತು, ಅದರಿಂದ ಅಪ್ಪುನ ಕಣ್ಣ್ತುಂಬಿಕೊಂಡು ಬಾಯ್ ಬಿಟ್ಕೊಂಡ್ ನೋಡ್ತಾ ನಿಂತಿದ್ದ್ವಿ.. ಅಷ್ಟ್ರಲ್ಲಿ ಯಾರೋ ಒಬ್ಬ ಅಭಿಮಾನಿ ಓಡಿ ಹೋಗಿ ಅಪ್ಪುನ ತಬ್ಬಿಕೊಂಡ, ಸೆಕ್ಯುರಿಟಿ ಗಾರ್ಡ್ ಅವನನ್ನ ಎಳಿಯೋಕೆ ಬಂದ್ರು, ಆಗ ಅಪ್ಪು ಅವರನ್ನ ತಡೆದು,😇 ಬಂದ ಅಭಿಮಾನಿನ ಮಾತಾಡ್ಸಿ ಫೋಟೋ ತೆಗಸ್ಕೊಂಡು ಆಮೇಲೆ ಮನೆ ಒಳಗೆ ಹೋದ್ರು.. ಇದು ಒಂದು ಚಿಕ್ಕ ಘಟನೆನೇ ಇರಬಹುದು ಆದರೆ ನಮಗೆ ಹಾಗೂ ಆ ಅಭಿಮಾನಿಗೆ ಅದು ಜೀವನಪೂರ್ತಿ ಉಳಿಯೋ ಸುವರ್ಣ ಘಳಿಗೆ..🥰
ಇಷ್ಟೆಲ್ಲಾ ಇಷ್ಟ ಪಡೋ ಅಪ್ಪು ಮಲಗಿರೋ ಫೋಟೋ ನಿನ್ನೆ ಎಲ್ಲಾ ಕಡೆ ಹರಿದಾಡ್ತಾ ಇದ್ದಾಗ, ಅದನ್ನು ಮತ್ತೆ ನೋಡೋ ಧೈರ್ಯ ಬರಲಿಲ್ಲ😓.. ನಮ್ಮಮ್ಮ ಹುಡುಗರು ಚಿತ್ರದಲ್ಲಿ ಅಪ್ಪು ಕಣ್ಣಿಗೆ ಏಟು ಮಾಡ್ಕೋಂಡು ಅಭಿನಯ ಮಾಡೋವಾಗ ಹೇಳೋರು, ನಮ್ಮ ಅಪ್ಪುನಾ ಈ ಥರ ಎಲ್ಲಾ ನೋಡಕೆ ಆಗಲ್ಲಪ್ಪ.. ಅಪ್ಪು ಯಾವಾಗಲೂ ನಗತಾ ಇರಬೇಕು ಅಂತ.. ನಗುವಿನ ಒಡೆಯ ಆಗಿದ್ದ ಅಪ್ಪು, ನಮ್ಮೆಲ್ಲರ ನಗುನ ಹೀಗೆ ಆರ್ಧಕ್ಕೆ ನಿಲ್ಲಿಸಿ ಹೋಗ್ತಾರೆ ಅಂತ ಯಾವತ್ತೂ ಅನ್ಕೊಂಡಿರ್ಲಿಲ್ಲ.. ಮೊದಲನೇ ಸಲ ಅಪ್ಪು ಮೇಲೆ ತುಂಬಾ ಕೋಪ ಬರ್ತಾ ಇದೆ..😠
ಅಪ್ಪು-ಅಪ್ಪಟ ಕನ್ನಡದ ಪ್ರತಿಭೆ, ಅಪ್ಪನ ಹೆಸರು ಉಳಿಸಿದ ಅಪ್ಪನಂತೆ ಇದ್ದ ಕರ್ನಾಟಕದ ಮನೆಮಗ, "ನಿನ್ನನು ಪಡೆದ ನಾವೇ ಪುನೀತ" ಅಂತ ಈಗ ಹೇಗೆ ಹೇಳೋದು.. "ಜೊತೆಗಿರು ನೀನು ಅಪ್ಪನ ಹಾಗೆ" ಅಂತ ಹೇಳಿದ್ದು ನಿಜ ಆದರೆ ಅಪ್ಪನ ಹತ್ತಿರ ಹೋಗೋಕೆ ಯಾರ್ ಹೇಳಿದ್ದು.. ತುಂಬಾ ನೋವಿನಿಂದ, ಇನ್ನು ಮುಂದೆ ಅಪ್ಪು ಭೌತಿಕವಾಗಿ ನಮ್ಮ ಜೊತೆಗೆ ಇಲ್ಲಾ ಅನ್ನೋ ಕಹಿ ಸತ್ಯನ ಒಪ್ಪಿಕೊಳ್ಳೋ ಪರಿಸ್ಥಿತಿ ಇಡೀ ಕರುನಾಡಿಗೆ ಬಂದಿದೆ..
ಜೀವನ ನೀರಿನ ಮೇಲಿನ ಗುಳ್ಳೆಯಂತೆ, ಯಾವಾಗ ಬೇಕಾದರೂ ಗುಳ್ಳೆ ಒಡೆದುಹೋಗ್ಬಹುದು.. ಅದಿಕ್ಕೆ ಇರೋಷ್ಟು ದಿನ ಎಲ್ಲಾರ ಜೊತೆಗೆ ಚೆನ್ನಾಗಿ ಇರೋಕೆ ಪ್ರಯತ್ನ ಪಡೋಣ, ನಮಗೆ ಕೆಟ್ಟದ್ದು ಬಯಸೋರಿಗೂ ಒಳ್ಳೇದೆ ಬಯಸೋಣ, ಸಾಧ್ಯವಾದಷ್ಟು ಕೈಲಾದವರಿಗೆ ಸಹಾಯ ಮಾಡೋಣ.. ಪೂರ್ವಾಗ್ರಹ ಪೀಡಿತ ಯೋಚನೆಗಳನ್ನ ನಿಲ್ಲಿಸೋಣ, ಪ್ರತಿಯೊಬ್ಬರ ಕಷ್ಟ ಅವರಿಗೆ ಮಾತ್ರ ಗೊತ್ತಿರುತ್ತೆ.. ಆದಷ್ಟೂ ಕೂಡಿ ಬಾಳಿ ಎಲ್ಲರಿಗೂ ಸಂತೋಷ ಹಾಗೂ ಒಳ್ಳೆಯ ವಿಚಾರಗಳನ್ನು ಹಂಚೋ ಪ್ರಯತ್ನ ಮಾಡೋಣ.. 🙏🤗
ಅಪ್ಪುವಿನ ಆ ನಗು ಎಲ್ಲೆಡೆ ಹರಡಲಿ😊, ಅಪ್ಪು ಬೆಳಗಲಿ..🤗
ಲವ್ ಯೂ ❤️ಅ್ಯಂಡ್ ಮಿಸ್ ಯೂ ಅಪ್ಪು😭.......