Sunday, 11 February 2018

Abhipraaya.. ಅಭಿಪ್ರಾಯ..

ಅಂಕಣ ಕೂಡ ಕಳೆದ ಅಂಕಣದ ಹಾಗೆ ಸತ್ಯ ಘಟನೆ.. ಹೆಸರು ಸೂಕ್ತವಾಗಿದೆ ಅಂತ ಅನ್ಸುತ್ತೆ..
ಕೆಲಸಕ್ಕೆ ಸೇರಿ ಒಂದೆರಡು ವರ್ಷ ಆಗ್ತಿದ್ದಹಾಗೆ, ಎಷ್ಟೋ ಸಲ ನಮ್ಮ ಗೆಳೆಯ-ಗೆಳತಿಯರ ಜೊತೆ ಮಾತಾಡೋವಾಗ ಬರೋ ಸಾಮಾನ್ಯ ವಿಷಯ ಇದು.. ಮದುವೆ ಯಾವಾಗ??
ಅದಕ್ಕೆ ಉತ್ತರಗಳೂ ಕೂಡ ಸಾಮಾನ್ಯವಾಗಿ, ಈ ವರ್ಷ ಆಗುತ್ತೆ, ಜಾತಕ ಸೆಟ್ ಆಗ್ಲಿಲ್ಲ, ಗುರು ಬಲ ಇಲ್ಲ, ಹುಡುಗ/ಹುಡುಗಿ ಇಷ್ಟ ಆಗ್ಲಿಲ್ಲ, ನಮ್ಗೆಲ್ಲಾ ಯಾರು ಸಿಗ್ತಾರೋ ನೋಡೋಣ ಅಂತ ಬರುತ್ತೆ.. ಆದ್ರೆ ಕೆಲವರು (ನಮ್ಮ ವಂಶಿ, ಮ್ಯಾಡಿ) ಯಾಕೋ ಮದುವೆನೆ ಬೇಡ ಅಂತ ಕೂತಿದರೆ.. ನಮ್ಮ ಹುಡುಗ್ರಾ ಹಿಂಗೆ ಹೇಳ್ತಿರೋದು ಅಂತ ತುಂಬಾ ಸಲ ಡೌಟು ಬಂದಿದೆ ಬಿಡಿ, ಅದು ಬೇರೆ ವಿಷಯ ( ಅದರ ಬಗ್ಗೆ ತುಂಬಾ ಡಿಸ್ಸ್ಕಶನ್ ಕೂಡ ಆಗಿವೆ).. ಈ ವಿಚಾರವಾಗಿ ಎಷ್ಟೇ ಮಾತಡಿದ್ದ್ರೂ ನಮ್ಮ ಅಭಿಪ್ರಾಯನ ಅವರ ಮೇಲೆ ಹೇರಿದ ಹಾಗೆ ಆಗುತ್ತೆ.. ಅದು ಎಷ್ಟು ಸರಿ ಅಂತ ಯೋಚನೆ ಮಾಡೋ ಹೊತ್ತಿನಲ್ಲಿ ಈ ಘಟನೆ ನಡೆಯಿತು.. ಅದೂ ಕೂಡ ಕಾಕತಾಳೀಯ.. ಸರಿ ಜಾಸ್ತಿ ತಲೆ ತಿನ್ನದೇ ಮುಖ್ಯ ವಿಷಯಕ್ಕೆ ಬರ್ತಿನಿ..
ಜನವರಿ ೨೦೧೮ರ ಒಂದು ಬುಧವಾರ ಸಂಜೆ, ಆಫೀಸ್ ಕೆಲಸ ಮುಗಿಸಿ ಮೆಟ್ರೋ ಹತ್ತಿದೆ, ಯಾವಾಗಲೂ ರಾಸು (ರಾಜು) ಇರೋನು, ಇವತ್ತು ಇರಲಿಲ್ಲ.. ರಾಜಾಜಿನಗರಕ್ಕೆ ಹೋಗ್ಬೇಕಾಗಿದ್ದರಿಂದ ಮೆಜೆಸ್ಟಿಕ್ ಅಲ್ಲಿ ಇಳಿದು ಹಸಿರು ಮಾರ್ಗದ ಮೆಟ್ರೋ ಹತ್ತಬೇಕಿತ್ತು, ಆಗ ತಾನೆ ನಾಗಸಂದ್ರದ ಕಡೆ ರೈಲು ಹೋಗಿತ್ತು, ಆದರಿಂದ ಮುಂದಿನ ರೈಲಿಗೆ ಇನ್ನೂ ಎಂಟು ನಿಮಿಷಗಳ ಕಾಲ ಕಾಯಬೇಕಾಯಿತು.. ಆಗ ಯಾವುದೋ ಒಂದು ಪರಿಚಿತ ಮುಖ ನನ್ನನ್ನು ಗುರುತಿಸಿ ನಕ್ಕಿತು.. ಒಂದು ಕ್ಷಣ ಯಾರು ಅಂತ ತಿಳಿಯಲಿಲ್ಲ.. ಆದರೆ ನಮ್ಮ ಕಾಲೇಜು ಹುಡುಗ ಅಂತ ಗೊತ್ತಾಯ್ತು (ಹೆಸರು ನೆನಪಿರಲಿಲ್ಲ), ಇನ್ ಫ್ಯಾಕ್ಟ್ ಯಾವತ್ತೂ ಹೆಸರು ಕೇಳಿರಲಿಲ್ಲ.. ಮುಖ ಪರಿಚಯ ಅಷ್ಟೇ.. ಆದ್ರೂ ನಮ್ಮ ಮಾತು ಶುರು ಆಗಿದ್ದೆ ಹೇಗಿದ್ದೀಯಾ ಮಗ ಅಂತ.. ರಾಜಕುಮಾರ ಫಿಲ್ಮ್ ಅಲ್ಲಿ ಪುನೀತ್ ಹೇಳೋ "ಫ್ರೆಂಡ್ ಶಿಪ್ ಅಂದ್ರೆ ನಮ್ದೇ ರಿ ಹುಡುಗ್ರುದು" ಅನ್ನೋ ಡೈಲಾಗ್ ರಪ್ಪ್ ಅಂತ ಪಾಸಾಯ್ತು..
ಪರಸ್ಪರ ಕುಶಲೋಪರಿ ಆಯ್ತು, ಆಮೇಲೆ ಮತ್ತೆ ಮದುವೆ ಯಾವಾಗ ಅಂತ ಕೇಳ್ದೆ..
ಅವನು: ಮದುವೆ ಎಲ್ಲಾ ಆಗಲ್ಲ ಮಗಾ..
ನಾನು: ಹೌದಾ, ಯಾಕ್ ಗುರು ಏನಾಯ್ತು.??
ಅ:ಸುಮ್ನೆ ಬೇಡ ಅಂತ ಡಿಸೈಡ್ ಮಾಡಿದ್ದಿನಿ.. ನಿಂದು??
ನಾ: ನಂದು ಹುಡುಕಾಟ ಶುರು ಆಗಿದೆ.. ನಿಮ್ಮ ಮನೇಲಿ ಏನು ಹೇಳಿಲ್ವಾ ಮದ್ವೆ ಬೇಡ ಅಂದಿದಕ್ಕೆ??
ಅ: ಅವ್ರೇನು ಹೇಳಲ್ಲ.. ನಾನು ಮೊದಲೇ ಹೇಳಿದಿನಿ..
ನಾ: ಮತ್ತೆ ಊರಲ್ಲಿ ಅಮ್ಮ ಅಪ್ಪ??
ಅ: ಅಪ್ಪ ರೀಸೆಂಟ್ಲಿ ತೀರಿ ಹೋದರು.. ಈಗ ಅಮ್ಮ ಅಕ್ಕ ಇದಾರೆ..
ನಾ: ಸಾರಿ ಮಗಾ, ವಿಷಯ ಗೊತ್ತಿರಲಿಲ್ಲ.. ಹಾಗಿದ್ದ್ರೆ ಈಗಲೇ ನೀನು ಅಮ್ಮನ ಜೊತೆಯಲ್ಲಿ ಇರ್ಬೇಕು.. ಅಕ್ಕ??
ಅ: ಅಕ್ಕ, ಅಮ್ಮನ್ನ ನೋಡ್ಕೋತಾಳೆ.. ನಾನು ಬೇರೆ ಎಲ್ಲಾದರು ಸೆಟ್ಲ್ ಆಗ್ಬೇಕು..
(ಒಂದು ಕ್ಷಣ ನಂಗೆ ಏನ್ ಹೇಳಬೇಕೋ ಗೊತ್ತಾಗ್ಲಿಲ್ಲ)
ನಾ: ಎಲ್ಲಾದರೂ ಅಂದ್ರೆ ಎಲ್ಲ್ ಹೋಗ್ತಿಯಾ.. ನಮ್ಮೂರು ಬಿಟ್ಟು..
ಅ:ಗುಜರಾತ್ ಕಡೆ ಹೋಗಣ ಅಂತ.. ಇಲ್ಲಿ ಸ್ವಲ್ಪ ಸೇವಿಂಗ್ಸ್ ಮಾಡಿ, ಒಂದ್ ಹತ್ತು ವರ್ಷ ಆದ್ಮೇಲೆ ಅಲ್ಲಿಗೆ ಹೋಗ್ತೀನಿ..
ನಾ: ಅಮ್ಮ, ಅಕ್ಕ??
ಅ: ಅವ್ರು ಇಲ್ಲೆ ಇರ್ಲಿ.. ಹಾಗೆ ನೀನು ಏನಾದರೂ ಸೇವಿಂಗ್ಸ್ ಮಾಡಿದ್ದೀಯಾ ಏನು??
ನಾ: ಸೇವಿಂಗ್ಸ್ ಅಂತ ನಾನೇನು ಮಾಡಿಲ್ಲ.. ಅಮ್ಮ ನೋಡ್ಕೋತಾರೆ ಅದೆಲ್ಲಾ..
ಅಷ್ಟ್ ಹೊತ್ತಿಗೆ ಮೆಟ್ರೋ ಬಂತು, ಹತ್ಕೊಂಡ್ವಿ..
ಆಮೇಲೆ ನಂಗೇ ಹೆಚ್ಚು ಮಾತಡಬೇಕು ಅಂತ ಅನ್ಸ್ಲಿಲ್ಲ.. ಎಲ್ಲಿ ಇಳ್ಕೋಬೇಕು ಅಂತ ಕೇಳ್ದೆ.. ಕುವೆಂಪು ರಸ್ತೆ ಅಂದ.. ಸ್ಟಾಪ್ ಬಂತು ಇಳ್ಕೊಂಡ.. ಆಕ್ಚ್ಯುಲಿ ಅವನು ಶ್ರೀರಾಮಪುರ ಸ್ಟೇಷನ್ ಅಲ್ಲೇ ಇಳ್ಕೊಂಡ.. ನಾನು ಗಮನಹರಿಸಲಿಲ್ಲ.. ಕುವೆಂಪು ರಸ್ತೆ ಬಂದಾಗ ನೋಡಿದ್ದ್ರೆ ಅವ್ನು ಹಿಂದಿನ ಸ್ಟಾಪ್ ಅಲ್ಲೇ ಇಳಿದಿದಾನೆ ಅಂತ ಗೊತ್ತಾಯ್ತು..
ಪಾಪ ತುಂಬಾ ಗೊಂದಲದಲ್ಲಿದ್ದಾನೆ ಅಂತ ಅನ್ಕೊಂಡು, ಮನೆ ಕಡೆ ನೆಡ್ಕೊಂಡು ಹೊರಟೆ.. ಆಗ ಅವನು ಮಾತಾಡಿದ ಹಲವಾರು ವಿಷಯ ಯೋಚನೆಗೆ ಬಂತು.. ಮೊದಲಿಗೆ ಅವ್ನು ಮದುವೆ ಆಗಲ್ಲ ಅಂದಾಗ, ಈಗಿನ ಒಂದಷ್ಟು ಡಿಫ಼ರೆಂಟ್ ಹುಡುಗರ ತರ ಇವನಿಗೂ ಅನ್ಸಿರಬೇಕು.. ಅದ್ರಲ್ಲೇನು ತಪ್ಪಿಲ್ಲ ಬಿಡು ಅನ್ಕೊಂಡೆ.. ಆದರೆ ಯಾವಾಗ ಅವ್ನು ಅವರ ತಂದೆ ಕಾಲವಾಗಿದ್ದು ಹಾಗು ಅಮ್ಮನ್ನ ಬಿಟ್ಟು ಬೇರೆ ಊರಲ್ಲಿ ಸೆಟ್ಲ್ ಆಗ್ತೀನಿ ಅಂದ್ನೋ, ಒಂದು ಕ್ಷಣ ಬಹಳ ಕೋಪ ಬಂತು.. ಈ ಟೈಮಲ್ಲಿ ಅಮ್ಮ-ಅಕ್ಕನ್ನ ಬಿಟ್ಟು ಹೋಗ್ತಿನಿ ಅಂತ ಎಷ್ಟು ಆರಾಮಾಗಿ ಹೇಳಿದ್ನಲ್ಲ.. ಹೇಗೆ ಮನಸ್ಸು ಬಂತು ಇವ್ನಿಗೆ.. ಅದೂ ಅಲ್ದೇ ಗುಜರಾತ್ ಗೆ ಹೋಗಿ ಸೆಟ್ಲ್ ಆಗ್ತಾನಂತೆ.. ನಾವೆಲ್ಲಾ ನಮ್ಮೂರೇ ಸ್ವರ್ಗ ಅಂತ ನಂಬ್ಕೊಂಡೋರು.. ಈಗ್ಲೂ ನಂಗೆ ಟ್ರಾನ್ಸ್ಫ಼ರ್ ಸಿಕ್ಕ್ರೆ ಮೊದಲು ರೈಟ್ ಹೇಳೋಣ ಅಂತ ಕಾಯ್ತಿದ್ದೀನಿ.. ಹೆಂಗೆಲ್ಲಾ ಇರ್ತಾರೋ ಜನಗಳು ಅಂತ ಒಂದು ಕನ್ಕ್ಲೂಷನ್ ಗೆ ಬರೋಷ್ಟರಲ್ಲಿ ಮನೆಗೆ ಬಂದೆ.. ಊಟ ಮುಗಿಸಿ ಮಲಗೋ ಟೈಮಲ್ಲಿ ಮತ್ತೆ ನೆನಪಾಯ್ತು.. ನಾನು ಈ ವಿಚಾರವಾಗಿ ಅಥವಾ ಆ ಹುಡುಗನ ಬಗ್ಗೆ ಆಗಲಿ ಏನೇ ಯೋಚನೆ ಮಾಡಿ ಎಷ್ಟೇ ಅನಲೈಸ್ ಮಾಡಿದ್ದರು, ಅದು ನನ್ನ ಜೀವನದ ಅಥವಾ ಜೀವಿತಾವಧಿಯಲ್ಲಿ ನನಗಾದ ಅನುಭವ ಹಾಗೂ ಸುತ್ತಲಿನ ಪರಿಸರದಿಂದ ಪ್ರೇರೇಪಿತವಾದ ಅಂತಿಮ ಅಭಿಪ್ರಾಯ.. ಅದು ನನ್ನ ಮಟ್ಟಿಗೆ ಸರಿ ಇರಬಹುದು.. ಆದರೆ ಅವನು ಮಾಡ್ತಿರೋದು ತಪ್ಪಾ-ಸರೀನಾ ಅಂತ ಅವನ ಸ್ಥಾನದಲ್ಲಿ ನಿಂತು ನೋಡಿದಾಗ ಅವನ ಅಭಿಪ್ರಾಯ ಕೂಡ ನಮ್ಮಂತೆಯೇ ಅವನು ಬೆಳೆದ ಪರಿಸರ ಹಾಗು ಅನುಭವಗಳ ಮೇಲೆ ಅವಲಂಬಿತ.. ಹೀಗೆ ಒಬ್ಬೊಬ್ಬರ ದೃಷ್ಟಿಕೋನದಿಂದ ನೋಡಿದಾಗ ಒಬ್ಬೊಬ್ಬರ ಪರಿಸ್ಥಿತಿ ಹಾಗು ನಿರ್ಧಾರಗಳು ಸರಿ ಅಥವಾ ತಪ್ಪು ಅಂತ ಅನ್ಸುತ್ತೆ.. ಆದರೆ ಅದೆ ಅಂತಿಮ ಅಲ್ಲ.. ಯಾಕಂದ್ರೆ ನನ್ನ ಫ್ರೆಂಡ್ ಒಬ್ಬ ಹೇಳಿದ ಹಾಗೆ "ಲೈಫ್ ಇಸ್ ಸಿಂಪಲ್, ಆ್ಯಂಡ್ ಸಿಂಪಲ್ ಇಸ್ ಕಾಂಪ್ಲಿಕೇಟಡ್".. ನಮ್ಮ ಲೈಫಲ್ಲಿ ಯಾವಾಗ ಏನಾಗುತ್ತೋ, ಅದರ ಮೇಲೆ ನಮ್ಮ ಅಭಿಪ್ರಾಯಗಳು ಬೇರೂರಿತ್ತದೆ ಅಂತ ನನ್ನ ಅಭಿಪ್ರಾಯ.. ಅಂದ್ಹಾಗೆ ನಿಮ್ಮ ಅಭಿಪ್ರಾಯ ದಯವಿಟ್ಟು ತಿಳಿಸಿ..
ತುಂಬಾ ಸೀರಿಯಸ್ ವಿಷಯ ಹಿಡ್ಕೊಂಡು ಬೋರ್ ಹೊಡ್ಸಿದ್ದರೆ ಅದೂ ಕೂಡ ನಿಮ್ಮ ಅಭಿಪ್ರಾಯನೇ.. ಮರೆಯದೆ ತಿಳಿಸಿ..

25 comments:

  1. Wow,nice manju, mathondhu nijavaadha gataneyannu , saralavadha padhagalalli ellara manasiggu,mutisidhya , hatsoff 👌👌.. Yes our surrounding happing things mould us in its own way, still I certainly feel we can make a better decision with discussing our problems with our closed ones and making a good decision ,unlike the character u described here , has taken a bit wrong decision, wat I felt ...

    Good manju , keep going with more stories in this line 👍👍👍

    ReplyDelete
    Replies
    1. Haudu Rasu, pratiyobbara vyaktitwa nirdhaara aagoke main reason Ade.. but adanne itkondu koragade munde hogbeku..
      Thanks for ur words..🙏👍

      Delete
  2. This comment has been removed by the author.

    ReplyDelete
  3. This comment has been removed by the author.

    ReplyDelete
  4. Thumba chennagide manju baravanige..munduvaresikondu hogi olledagali.👍👍

    ReplyDelete
    Replies
    1. Thanks madam.. nimmantha odhugara maathugalu spoorthi..🙂😁

      Delete
  5. howdu obbobbara jeevanada theermanagalu avaravara jeevanada paristhithigala mele avalambita.....Abhipraya heluvudakku modalu avalokane beku.....nice msg manju..

    ReplyDelete
  6. Every induvidual is unique. Opinions differ from person to person. We are the who are responsible for our own life.
    Hence, it is better to take good decisions at the right time...
    A good message interpreted, Manju....

    ReplyDelete
    Replies
    1. Thanks madam.. swalpa janakke reach aadru saaku..👍🙂

      Delete
  7. Every person has their own perception,being simple is very difficult,so no complications,no obligation,don't be judgemental..nice interpretation Manju,Respect bro 👍

    ReplyDelete
    Replies
    1. Thanks unknownu..🙂👍😁 thanks for ur time..🙏

      Delete
  8. Really very nice story narration bro :)

    It's all about one's perspective. Everyone is right in their's own perspective.We can't judge but we can try to analyze from different corner.

    ReplyDelete
    Replies
    1. Thank you Kishor.. thanks for your views..🙂👍😁

      Delete
  9. True Manju, try as hard as we can, we will always see another man's deeds through our own perspective, which is forged by our upbringing and immediate society, because, it is but human tendency to do so. Probably if we see him through his lens, we may perhaps understand him, rather than judge.

    ReplyDelete
    Replies
    1. Yes Krishnanna, alwayzz.. thanks for ur words..🙂👍🙏😁

      Delete
  10. For how long you’ve been writing Manju?? Seriously this didn’t feel like your second blogpost. It was way too ahead !
    Thumba chanagide. Expecting a lot more ������

    ReplyDelete
    Replies
    1. Thanks a lot rakshi.. started from Jan 2018.. hope I'll continue to write more and more.. thanks for ur words..🙂👍

      Delete
  11. Yella maathugalu abipraaya antha helak aagala...kelvomme kevala maathu aste..avanu ond stop munchene ilithane..adhu ninage gondala antha ansthu....idhu ninna abipraaya...
    But..
    Neen maatra ninna stop ge correct aagi ilidhu ...ee blog na bardhala....kushi aithu....idhu nanna abipraaya....idanna odhi nagu bandare matthe ..adhu ninna abipraaya...

    ReplyDelete
  12. Olle abhipraya.. dhanyavadagalu G-kon

    ReplyDelete